top of page
ಬಿಬಿಎಂಪಿ_ಲೋಗೋ (2).png

ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವಿತಗೊಳಿಸುವುದು

ನಮ್ಮ ಜಾನ,
ನಮ್ಮ ಜಾಗ
ಬೆಂಗಳೂರಿನ ಬೀದಿಗಳಲ್ಲಿ ಬಳಕೆಯಾಗದ ನೆರೆಹೊರೆಯ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವಲ್ಲಿ ಬಿಬಿಎಂಪಿಯೊಂದಿಗೆ ಕೈಜೋಡಿಸಿ.
ಬಯಸಿದಂತೆ ಬಯಲು
ಬೆಂಗಳೂರಿನ ಬೀದಿಗಳಲ್ಲಿ ಬಳಕೆಯಾಗದ ನೆರೆಹೊರೆಯ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವಲ್ಲಿ ಬಿಬಿಎಂಪಿಯೊಂದಿಗೆ ಕೈಜೋಡಿಸಿ.
ತಾವು ಪ್ರತಿನಿತ್ಯ ಓಡಾಡುವಂತಹ ಸ್ಥಳಗಳಲ್ಲಿ ಅಂದರೆ ರಸ್ತೆಗಳ ಮೂಲೆಗಳು, ಜಂಕ್ಷನ್‌ಗಳು ಅಥವಾ ಬಳಕೆಯಾಗದೇ ಉಳಿದಿರುವಂತಹ ಸಾರ್ವಜನಿಕ ಸ್ಥಳಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮಪಡಿಸಬಹುದೆಂದು ಬಯಸಿದ್ದೀರಾ? 
ನಿಮ್ಮ ನೆರೆಹೊರೆಯಲ್ಲಿ ಪುನರುಜ್ಜೀವನಗೊಳಿಸಲು ಯೋಗ್ಯವಿರುವ ಒಂದು ಸ್ಥಳವನ್ನು ಸೂಚಿಸಿ.
ತಾವು ಪ್ರತಿನಿತ್ಯ ಓಡಾಡುವಂತಹ ಸ್ಥಳಗಳಲ್ಲಿ ಅಂದರೆ ರಸ್ತೆಗಳ ಮೂಲೆಗಳು, ಜಂಕ್ಷನ್‌ಗಳು ಅಥವಾ ಬಳಕೆಯಾಗದೇ ಉಳಿದಿರುವಂತಹ ಸಾರ್ವಜನಿಕ ಸ್ಥಳಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮಪಡಿಸಬಹುದೆಂದು ಬಯಸಿದ್ದೀರಾ? 

ನಿಮ್ಮ ನೆರೆಹೊರೆಯಲ್ಲಿ ಪುನರುಜ್ಜೀವನಗೊಳಿಸಲು ಯೋಗ್ಯವಿರುವ ಒಂದು ಸ್ಥಳವನ್ನು ಸೂಚಿಸಿ.

ಬಿಬಿಎಂಪಿ ಹೀಗೆ ನಿಮ್ಮಿಂದ ಸೂಚಿಸಲಾಗಿರುವ ಸ್ಥಳಗಳನ್ನು ಅವುಗಳ ಸುಧಾರಣೆಯ ಸಾಧ್ಯತೆ ದೃಷ್ಟಿಯಿಂದ ಮೌಲ್ಯಮಾಪನ ಮಾಡುವುದು; ಈ ಪ್ರಕ್ರಿಯೆಯಲ್ಲಿ ಅಯ್ಕೆಯಾದ ಕೆಲವು ಸ್ಥಳಗಳನ್ನು ವರ‍್ಷಿಕ ಯೋಜನೆಗಳ ಮೂಲಕ ಅನುಷ್ಠಾನಕ್ಕಾಗಿ ತೆಗೆದುಕೊಳ್ಳಲಾಗುವುದು. 
ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆಯನ್ನು ತರಬಹುದಾದ ಸ್ಥಳಗಳನ್ನು ನಾವು ಹುಡುಕುತ್ತಿದ್ದೇವೆ.

ಕಾರ್ಯಕ್ರಮಕ್ಕೆ ಅರ್ಹವಾದ ಸ್ಥಳಗಳ ಪ್ರಕಾರಗಳು*

1.  ಸಮುದಾಯ ಸ್ಥಳಗಳು

ಇವು ಸಾಂಪ್ರದಾಯಕವಾದ ತಾಣಗಳು, ಇವುಗಳನ್ನು ಧಾರ್ಮಿಕ ಸಮಾವೇಶಗಳು, ಸಾಮಾಜಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳಿಗಾಗಿ ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿರುವ, ಆದರೆ, ಕಾಲಕ್ರಮೇಣ ನಗರೀಕರಣಕ್ಕೆ ಬಲಿಯಾಗಿ ತಮ್ಮ ಸಾಂಪ್ರದಾಯಿಕ ಗುಣವನ್ನು ಕಳೆದುಕೊಂಡ ಸ್ಥಳಗಳು

ವರ್ಗಗಳು:

  • ಕಟ್ಟೆಗಳು

  • ನಗರ ಗ್ರಾಮ ಚೌಕಗಳು 

2.  ಬಳಸದೇ ಉಳಿದ ಸ್ಥಳಗಳು

ಮೂಲಭೂತ ಸೌಕಯ ಯೋಜನೆಗಳ ಅನುಷ್ಠಾನದ ನಂತರ, ಆ ಯೋಜನೆಯ ಭಾಗವಾಗಿರದ ಕಾರಣಕ್ಕಾಗಿ ಸದರಿ ಜಾಗಗಳನ್ನು ಬಳಸದೇ ಇರುವುದು ಅಥವಾ ಕಡಿಮೆ ಬಳಕೆಯಾದ ಸ್ಥಳಗಳು, ಇವು ಕ್ರಮೇಣ ನಕಾರಾತ್ಮಕ ಚಟುವಟಿಕೆಗಳಿಗೆ ಆಶ್ರಯ ನೀಡುವ ತಾಣಗಳಾಗಬಹುದು.

ವರ್ಗಗಳು :

  • ಫ್ಲೈ ಓವರುಗಳು/ ಮೆಟ್ರೋ ಮಾರ್ಗಗಳ ಅಡಿಯಲ್ಲಿ ಇರುವ ಸ್ಥಳಗಳು

  • ಹಸಿರು ಮತ್ತು ನೀಲಿ ಅಂಚುಗಳು  

  • ಮೂಲ ಸೌಕರ್ಯಗಳ ಬಫರುಗಳು

3.  ಬಹುಪಯೋಗಿ ಬೀದಿಗಳು

ಸಾಮಾನ್ಯವಾಗಿ ಓಡಾಡುವ ಜನ ಮತ್ತು ವಾಹನಗಳಲ್ಲದೇ, ಒಂದು ಅಥವಾ ಹೆಚ್ಚು ಸಾರ್ವಜನಿಕ ಚಟುವಟಿಕೆಗಳಿಗೆ ಬಳಕೆಯಾಗುವ ಬೀದಿಗಳು, ಇವುಗಳಿಗೆ ಹೆಚ್ಚು ವಿಶೇಷವಾದ ವಿನ್ಯಾಸದ ಅಗತ್ಯವಿರುತ್ತದೆ.

ವರ್ಗಗಳು:

  • ತಿನಿಸು ಬೀದಿಗಳು

  • ವ್ಯಾಪಾರ/ಮಾರುಕಟ್ಟೆ ಬೀದಿಗಳು

  • ನಡೆಯಲು ಬಳಸುವ ಬೀದಿಗಳು

  • ಶಾಲಾ ಪ್ರವೇಶ ವಲಯಗಳು

  • ಕನ್ಸರ್ವೆನ್ಸಿ ಲೇನುಗಳು

4. ಸಾರಿಗೆ ಮತ್ತು ಸಂಚಾರ ಸ್ಥಳಗಳು

ಇವು  ಅತಿಯಾದ ವಾಹನ ಮತ್ತು ಪಾದಚಾರಿ ಸಂಘರ್ಷದ ಸ್ಥಳಗಳು; ಇವುಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿಸಲು ವಿಶಿಷ್ಟ ವಿನ್ಯಾಸದ ಕಾರ್ಯಾಚರಣೆಯ ಅಗತ್ಯವಿರುತ್ತದೆ.

ವರ್ಗಗಳು:

  • ಸಾರಿಗೆ ನೋಡ್ ಮತ್ತು ಸಂಪರ್ಕ ಬೀದಿಗಳು

  • ಜಂಕ್ಷನ್ನುಗಳು ಮತ್ತು ರಸ್ತೆ ದ್ವೀಪಗಳು

  • ಪಾದಚಾರಿಗಳ ಅಂಡರ್‌ ಪಾಸ್/ ಓವರ್‌ ಪಾಸ್‌ ಗಳು

ಸ್ಥಳಗಳನ್ನು ಸೂಚಿಸುವಾಗ ಈ  ಕೆಳಗಿನ ಅಂಶಗಳನ್ನುಪರಿಗಣಿಸಿಕೊಂಡು ಸದರಿ ಸ್ಥಳಗಳು ಹೆಚ್ಚಿನ ರೀತಿಯಲ್ಲಿ ಸುಧಾರಿಸಿಕೊಂಡು ಪರಿಣಾಮಕಾರಿಯಾಗಿ ಸಾರ್ವಜನಿಕ ರಿಗೆ ಬಳಕೆಯಾಗುವಂತಹ ಸ್ಥಳಗಳಿಗೆ ಅವಕಾಶವನ್ನು ನೀಡಬೇಕು.

ಸ್ಥಳದ ಆಯ್ಕೆಗೆ ಪರಿಗಣಿಸಬೇಕಾದ ಅಂಶಗಳು

ಆಯ್ಕೆಯಾದ ಸ್ಥಳವು ಸರ್ಕಾರದ ಮಾಲಿಕತ್ವದಲ್ಲಿರುವಂತಹ ಜಾಗ ಆಗಿರಬೇಕು.

ಮನೆಯಿಂದ ಕೆಲಸಕ್ಕೆ, ಶಾಲೆಗೆ ಮತ್ತು ಇತರೆ ಸ್ಥಳಗಳಿಗೆ ನಡೆದುಕೊಂಡು ಹೋಗುವುದನ್ನು, ಸೈಕ್ಲಿಂಗ್ ಮತ್ತು ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣವನ್ನು ಸಕ್ರಿಯಗೊಳಿಸಿ ಉತ್ತೇಜನ ನೀಡುವಂತಿರಬೇಕು.

ಸ್ಥಳವು ಹೆಚ್ಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಡನಾಟಕ್ಕೆ ಅವಕಾಶವನ್ನು ಒದಗಿಸುವುದರ ಜೊತೆಗೆ ನಮ್ಮ ತನದ ಭಾವನೆ ಮತ್ತು ಸಮುದಾಯವನ್ನು  ಒಗ್ಗೂಡಿಸುವಂತಿರಬೇಕು.

ಸ್ಥಳೀಯ ಹವಾಮಾನವನ್ನು ಸುಧಾರಿಸುವ ಸಲುವಾಗಿ ವಾತಾವರಣದಲ್ಲಿ ಉಷ್ಣತೆ, ವಾಯು ಮಾಲಿನ್ಯ, ನೀರಿನ ಕೊರತೆ, ಪ್ರವಾಹ ಇತ್ಯಾದಿಗಳನ್ನು ಕಡಿಮೆ ಮಾಡುವಂತಿರಬೇಕು.   

ನೆರೆಹೊರೆಯ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪರಿಸರ ಗುಣಲಕ್ಷಣಗಳ ಮೌಲ್ಯವನ್ನು ಹೆಚ್ಚಿಸಬೇಕು. 

ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ವಿಭಿನ್ನ ಸಾಮರ್ಥ್ಯ ಹೊಂದಿರುವ ಜನರಿಗೆ ಸಾರ್ವಜನಿಕ ಸ್ಥಳಗಳನ್ನು ಹೆಚ್ಚು ಸ್ನೇಹಪರವನ್ನಾಗಿಸುವ ಮೂಲಕ ಸೌಹಾರ್ದವನ್ನು ಉತ್ತೇಜಿಸಬೇಕು.

ಪಾದಚಾರಿಗಳು ಮತ್ತು ವಾಹನಗಳ ಸುರಕ್ಷತೆಯನ್ನು ಹೆಚ್ಚಿಸಿ, ಅಪರಾಧ ಮತ್ತು ಹಿಂಸಾಚಾರದ ಭೀತಿಯನ್ನು ಕಡಿಮೆ ಮಾಡಬೇಕು.

ಸ್ಥಳವು ಆಕಷಕವಾಗಿದ್ದು ವಾಕ್‌ ಮಾಡಲು ಮತ್ತು ಆಟವಾಡಲು ಉತ್ತೇಜಕರವಾಗಿದ್ದು, ಒತ್ತಡವನ್ನು ಕಡಿಮೆ ಮಾಡಿ ಮತ್ತು ಶಾಂತ ವಾತಾವರಣವನ್ನು ಒದಗಿಸುವ ಮೂಲಕ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವಂತಿರಬೇಕು.

ಅರ್ಜಿ ವಿವರಗಳು

ಈ ಕೆಳಗಿನವರಿಗಾಗಿ ಸಾರ್ವಜನಿಕ ಕರೆಯು ತೆರೆದಿದೆ: 

ಸಮುದಾಯ ಗುಂಪುಗಳು

(ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘಗಳು / ಅಪಾರ್ಟಮೆಂಟ್ ಸಂಘಗಳು/ ವಾಣಿಜ್ಯ ಸಂಘಗಳು/ ಎನ್‌ಜಿಒ / ಟ್ರಸ್ಟುಗಳು) 

ನೀವು ಈಗಾಗಲೇ ಒಬ್ಬ ಸ್ಥಳೀಯ ವಾಸ್ತುಶಿಲ್ಪಿಯನ್ನು ನೇಮಿಸಿಕೊಂಡಿರಬಹುದು ಮತ್ತು/ಅಥವಾ ಸಿದ್ಧಪಡಿಸಿರುವ ವಿನ್ಯಾಸವು ನಿಮ್ಮ ಬಳಿ ಇರಬಹುದು.

 

ವಾಸ್ತುಶಿಲ್ಪಿಗಳು/ ನಗರ ವಿನ್ಯಾಸಕಾರರು/ ವಿನ್ಯಾಸಕಾರರು (ಕಂಪನಿಗಳು/ಸಂಸ್ಥೆಗಳು)

ಸ್ಥಳವು ಇರುವ ವಾರ್ಡು/ನೆರೆಹೊರೆಯಲ್ಲಿರುವ ಸಮುದಾಯ ಗುಂಪುಗಳ ವಿವರಗಳನ್ನು ನೀಡಬೇಕು.

* ದಯವಿಟ್ಟು ಗಮನಿಸಿ: ತಾವು ತಿಳಿಸಲು ಇಚ್ಛಿಸುವ ಸ್ಥಳವು ಈ ಮೇಲೆ ತಿಳಿಸಲಾಗಿರುವ ಸ್ಥಳಗಳಿಗಿಂತ ವಿಭಿನ್ನವಾಗಿದ್ದಲ್ಲಿ 'ಇತರೆ' ಎನ್ನುವ ಆಯ್ಕೆಯಲ್ಲಿ ಸೇರಿಸಿ.

15 ಏಪ್ರಿಲ್ '25

ಯೋಜನೆಯ ಪ್ರಾರಂಭ- ಅರ್ಜಿ ಸ್ವೀಕಾರ ಆರಂಭ 

15ನೇ ಮೇ '25

ಅರ್ಜಿ ಸ್ವೀಕಾರ ಮುಕ್ತಾಯ

ಜುಲೈ ಅಂತ್ಯ

ಆಯ್ಕೆಯಾದ ಸ್ಥಳಗಳ ಘೋಷಣೆ

WhatsApp Image 2025-06-09 at 13.43.07.jpeg

Transformation stories

Transportation & Circulation spaces

Maurya Junction

The Hull

Transformation stories

Transportation & Circulation spaces

Race Course Junction

Compartment S4

Transformation stories

Leftover spaces

K100-Rajakaluve Rejuvenation

MOD Foundation

Transformation stories

Transportation & Circulation spaces

Carmelram, Sarjapur Road

Sponsorship from L&T technology Services (LTTS)

Transformation stories

Multi-functional streets

Gandhi Bazaar redevelopment

Developed by DULT and BBMP

Upcoming information session

No events at the moment

Information session and Q&A

30th May, 2025

ಸ್ಥಳದ ಆಯ್ಕೆಗೆ ಪರಿಗಣಿಸಬೇಕಾದ ಅಂಶಗಳು

ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸುವುದು" ಎಂಬ ಕಾರ್ಯಕ್ರಮವು ಬೆಂಗಳೂರಿನ ಹವಾಮಾನ ಕ್ರಿಯಾ ಕೋಶ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ 11, ನಿರ್ದಿಷ್ಟವಾಗಿ ಗುರಿ 11.7 - '2030, ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಪ್ರವೇಶಿಸಬಹುದಾದ, ಹಸಿರು ಮತ್ತು ಸಾರ್ವಜನಿಕ ಸ್ಥಳಗಳಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು, ವೃದ್ಧರು ಮತ್ತು ಅಂಗವಿಕಲರಿಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುತ್ತದೆ' ಎಂಬುದಕ್ಕೆ ಅನುಗುಣವಾಗಿದೆ.

MC_Target_11.7 (1).png
MC_Target_11.7 (1).png
1734937024202.jpg
MC_Target_11.7 (1).png
MC_Target_11.7 (1).png
MC_Target_11.7 (1).png

ಈ ಕಾರ್ಯಕ್ರಮವನ್ನು ಬಿಬಿಎಂಪಿ, ಸೆನ್ಸಿಂಗ್ ಲೋಕಲ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ (ಕರ್ನಾಟಕ), ಇವರು ಸಂಯುಕ್ತವಾಗಿ ರೂಪಿಸಿದ್ದಾರೆ, ಸಸ್ಟೇನಬಲ್ ಮೊಬಿಲಿಟಿ ನೆಟ್ವರ್ಕ್ ಇದನ್ನು ಬೆಂಬಲಿಸುತ್ತದೆ. ಬೆಂಗಳೂರು ವಾರ್ಡ್ ಸಮಿತಿ ಬಳಗವು ನಮ್ಮ ಸಾರ್ವಜನಿಕ ಸಂಪರ್ಕ ಪಾಲುದಾರರಾಗಿದ್ದಾರೆ. 

Sensing Local PNG logo-01 (1) (1).png
IUDI Karnataka logo (1)_edited.png
SMN_logo-final-black (4)_edited (1).png
images (1).png
bottom of page