
ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವಿತಗೊಳಿಸುವುದು
ಸಮುದಾಯ ಸ್ಥಳಗಳು
ಇವು ಸಾಂಪ್ರದಾಯಕವಾದ ತಾಣಗಳು, ಇವುಗಳನ್ನು ಧಾರ್ಮಿಕ ಸಮಾವೇಶಗಳು, ಸಾಮಾಜಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳಿಗಾಗಿ ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿರುವ, ಆದರೆ, ಕಾಲಕ್ರಮೇಣ ನಗರೀಕರಣಕ್ಕೆ ಬಲಿಯಾಗಿ ತಮ್ಮ ಸಾಂಪ್ರದಾಯಿಕ ಗುಣವನ್ನು ಕಳೆದುಕೊಂಡ ಸ್ಥಳಗಳು

ನಗರ ಗ್ರಾಮ ಚೌಕಗಳು
’ನಗರ ಗ್ರಾಮ’ದಲ್ಲಿ ಗುರುತಿಸಲಾಗಿರುವ ಚೌಕವು, ಸಾಮಾನ್ಯವಾಗಿ ಕೇಂದ್ರೀಯ ಖಾಲಿ
ಪ್ರದೇಶವಾಗಿರುತ್ತದೆ. ಇದು ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಗೆಗಳ ಕೇಂದ್ರವಾಗಿದ್ದು ಬಗೆಬಗೆಯಲ್ಲಿ ದೈನಂದಿನ ಬದುಕನ್ನು ಬೆಸೆಯುವ ಕೆಲಸವನ್ನು ಮಾಡುತ್ತದೆ. ಇಂಥ ಸ್ಥಳಗಳು ಸಾಮಾನ್ಯವಾಗಿ, ದೇವಸ್ಥಾನಗಳು ಅಥವಾ ಮಾರುಕಟ್ಟೆಗಳಂಥ ಪ್ರಮುಖ ತಾಣಗಳ ಹತ್ತಿರದಲ್ಲಿರುತ್ತವೆ. ನಗರ ಗ್ರಾಮ ಚೌಕಗಳು ಸಮುದಾಯ ಒಡನಾಟವನ್ನು ಉತ್ತೇಜಿಸುತ್ತವೆ, ಆದರೆ ಹೆಚ್ಚಿನ ಸಲ ಆಧುನಿಕ ಅಭಿವೃದ್ಧಿಯ ಅಬ್ಬರದಲ್ಲಿ ಇವು ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡಿರುತ್ತವೆ.
ಸ್ಥಳಗಳ ಉದಾಹರಣೆಗಳು:
1. ಗೊಟ್ಟಿಗೆರೆ, ಮೀನಾಕ್ಷಿ ಮಾಲ್
2. ಸೋಮೇಶ್ವರ ದೇವಸ್ಥಾನದ ಚೌಕ
3. ಬಸವನ ಗುಡಿಯ ಚೌಕ
4. ಬಿಸಿಲು ಮಾರಿಯಮ್ಮ ದೇವಸ್ಥಾನ ಚೌಕ
5. ದೊಡ್ಡೇನಕುಂದಿ ಗ್ರಾಮ ಚೌಕ

ಕಟ್ಟೆಗಳು
ಕಟ್ಟೆಗಳು ಎಂದರೆ, ಆಲದ ಮರದಂಥ ಪವಿತ್ರ ವೃಕ್ಷದ ಸುತ್ತ ಸಾಂಪ್ರದಾಯಿಕವಾಗಿ ಕಟ್ಟಲಾಗಿರುವ ವೇದಿಕೆ. ಸಾಮಾನ್ಯವಾಗಿ ಮರದ ಅಡಿಯಲ್ಲಿ ಒಂದು ಚಿಕ್ಕ ಗುಡಿ ಇದ್ದು, ಅದರ ಸುತ್ತ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ನಡೆಯುತ್ತವೆ. ಜನ ಸಾಮಾಜಿಕವಾಗಿ ಸೇರಲು, ಕುಳಿತು ವಿಶ್ರಾಂತಿಸಲು ಈ ಕಟ್ಟೆಗಳು ಪೂರಕವಾಗಿರುತ್ತವೆ.
ಸ್ಥಳಗಳ ಉದಾಹರಣೆ:
1. ಲಜಾರ್ ರಸ್ತೆ
2. ಬಿಸಿಲು ಮಾರಿಯಮ್ಮ ದೇವಸ್ಥಾನದ ಕಟ್ಟೆ
3. ಸುಬ್ಬಯ್ಯ ವೃತ್ತದ ಕಟ್ಟೆ
4. ಕೆಂಪೇಗೌಡ ವೃತ್ತದ ಕಟ್ಟೆ
ಬಳಸದೇ ಉಳಿದ ಸ್ಥಳಗಳು
ಮೂಲಭೂತ ಸೌಕಯ ಯೋಜನೆಗಳ ಅನುಷ್ಠಾನದ ನಂತರ, ಆ ಯೋಜನೆಯ ಭಾಗವಾಗಿರದ ಕಾರಣಕ್ಕಾಗಿ ಸದರಿ ಜಾಗಗಳನ್ನು ಬಳಸದೇ ಇರುವುದು ಅಥವಾ ಕಡಿಮೆ ಬಳಕೆಯಾದ ಸ್ಥಳಗಳು, ಇವು ಕ್ರಮೇಣ ನಕಾರಾತ್ಮಕ ಚಟುವಟಿಕೆಗಳಿಗೆ ಆಶ್ರಯ ನೀಡುವ ತಾಣಗಳಾಗಬಹುದು.

ಮೂಲ ಸೌಕರ್ಯಗಳ ಬಫರುಗಳು
ವಿದ್ಯುತ್ತಿನ ಹೈಟೆನ್ಷನ್ ಲೈನುಗಳು ಕೆಳಗೆ ಮತ್ತು ನೀರಿನ ದೊಡ್ಡ ಪೈಪುಗಳಿಗೆ ಅಂಟಿಕೊಂಡಿರುವ ರೀತಿಯ ಖಾಲಿ ಸ್ಥಳಗಳು. ಟ್ರಾನ್ಸ್ಮಿಷನ್ ಟವರುಗಳ ಮೇಲೆ ಜೋಡಿಸಿರುವ ಹೈಟೆನ್ಷನ್ ಲೈನುಗಳಿಂದಾಗಿ ಅವುಗಳ ಅಡಿಯಲ್ಲಿರುವ ಸ್ಥಳವು ಬೇರೆ ಕೆಲಸಕ್ಕಾಗಿ ಬಳಕೆಯಾಗಿರುವುದಿಲ್ಲ. ಹಾಗೆಯೇ ದೂರದೂರದ ವರೆಗೆ ನೀರನ್ನು ಸರಬರಾಜು ಮಾಡಲು ಅಳವಡಿಸಲಾಗಿರುವ ಬೃಹತ್ ಪೈಪುಗಳ ಎರಡೂ ಬದಿಗಳಲ್ಲಿ ಖಾಲಿ ಸ್ಥಳ ಇರುತ್ತದೆ.
ಸ್ಥಳದ ಉದಾಹರಣೆ:
1. ಪೈಪ್ಲೈನ್ ರಸ್ತೆ
2. ಕಸ ರಸ 2, ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರ
3. ಹೆಣ್ಣೂರು ಫ್ಲೈಓವರ್ ಪಕ್ಕದಲ್ಲಿ
4. ಬೈರಸಂದ್ರ ಕೆರೆ

ಹಸಿರು ಮತ್ತು ನೀಲಿ ಅಂಚುಗಳು
ಇವು ಹಸಿರು (ಉದ್ಯಾನಗಳು) ಮತ್ತು ನೀಲಿ (ಕೆರೆಗಳು, ರಾಜಾಕಾಲುವೆಗಳು) ಮುಂತಾದ ಮೂಲಸೌಕರ್ಯಗಳ ಬದಿಗಳಲ್ಲಿ ಇರುವ ಸ್ಥಳಗಳು. ಸದರಿ ಮೂಲಭೂತ ಸೌಕರ್ಯಗಳುಳ್ಳ ಪ್ರದೇಶಗಳ ಪ್ರವೇಶದ್ವಾರಗಳ ಬಳಿ ಅಥವಾ ಪಾದಚಾರಿಗಳ ಮಾರ್ಗಗಳಲ್ಲಿ ಸಾಕಷ್ಟು ಜಾಗವು ಲಭ್ಯವಿದ್ದರೂ ಸದರಿ ಜಾಗಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಗ್ಯವಾದಂತಹ ಜಾಗಗಳಾಗಿರುತ್ತವೆ.
ಸ್ಥಳಗಳ ಉದಾಹರಣೆ:
1. ರಿಚರ್ಡ್ಸ್ ಪಾರ್ಕ್
2. ಹಲಸೂರು ಕೆರೆ
3. ಕಬ್ಬನ್ ಪಾರ್ಕ್
4. ಕೆ 100
5. ಯಡಿಯೂರ ಕೆರೆ

ಫ್ಲೈ ಓವರುಗಳು/ ಮೆಟ್ರೋ ಮಾರ್ಗಗಳ ಅಡಿಯಲ್ಲಿ ಇರುವ ಸ್ಥಳಗಳು
ಇವು, ಸಾಮಾನ್ಯವಾಗಿ ಮೇಲ್ಸೇತುವೆಗಳು ಮತ್ತು ಮೆಟ್ರೋ ಮಾರ್ಗಗಳ ಅಡಿಯಲ್ಲಿ ಮತ್ತು ಕ್ಲೋವರುಗಳ ನಡುವೆ ಇರುವ ಸ್ಥಳಗಳು. ಮೇಲ್ಸೇತುವೆಗಳ ಕ್ಲೋವರುಗಳ ನಡುವಿನ ಪ್ರದೇಶಗಳಾಗಿರುತ್ತದೆ. ಸದರಿ ಜಾಗಗಳಲ್ಲಿ ಸಾಮಾನ್ಯವಾಗಿ ಸಾವಜನಿಕರು ಬಳಸಲು ಯೋಗ್ಯವಾದಷ್ಟು ಸಾಕಷ್ಟು ಎತ್ತರವಿದ್ದು ಪ್ರಯೋಜನಕಾರಿ ಚಟುವಟಿಕೆಗಳಿಗಾಗಿ ಬಳಸಿಕೊ ಳ್ಳಬಹುದಾಗಿರುತ್ತದೆ. ಇವು ಸಾಮಾನ್ಯವಾಗಿ ಪಾದಚಾರಿ ಮಾರ್ಗಗಳಿಂದ ಪ್ರತ್ಯೇಕಿತವಾಗಿರುತ್ತವೆ, ಜನದಟ್ಟಣೆ, ಸಂಚಾರ ನಿಬಿಡವಾದ ಚೌಕಗಳಲ್ಲಿ ಇವುಗಳನ್ನು ಕೆಲಸಕ್ಕೆ ಬಾರದ ಜಾಗಗಳು ಎಂಬಂತೆ ಉಪೇಕ್ಷಿಸಲಾಗುತ್ತದೆ.
ಸ್ಥಳಗಳ ಉದಾಹರಣೆಗಳು:
1. ಹಳೆ ಮದ್ರಾಸ್ ರಸ್ತೆ
2. ಬೆನ್ನಿಗಾನಹಳ್ಳಿ ಮೇಲ್ಸೇತುವೆ
3. ದೊಮ್ಮಲೂರು ಮೇಲ್ಸೇತುವೆ
4. ಕೋರಮಂಗಲ ಮೇಲ್ಸೇತುವೆ
5. ವ್ಹೀಲರ್ ರಸ್ತೆ ಮೇಲ್ಸೇತುವೆ
ಬಹುಪಯೋಗಿ ಬೀದಿಗಳು
ಸಾಮಾನ್ಯವಾಗಿ ಓಡಾಡುವ ಜನ ಮತ್ತು ವಾಹನಗಳಲ್ಲದೇ, ಒಂದು ಅಥವಾ ಹೆಚ್ಚು ಸಾರ್ವಜನಿಕ ಚಟುವಟಿಕೆಗಳಿಗೆ ಬಳಕೆಯಾಗುವ ಬೀದಿಗಳು, ಇವುಗಳಿಗೆ ಹೆಚ್ಚು ವಿಶೇಷವಾದ ವಿನ್ಯಾಸದ ಅಗತ್ಯವಿರುತ್ತದೆ.
