
ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವಿತಗೊಳಿಸುವುದು
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
1. ಸಾರ್ವಜನಿಕರು ವೈಯಕ್ತಿಕವಾಗಿ ಸ್ಥಳವನ್ನು ಸೂಚಿಸಬಹುದೇ?
ನೀವು ವೈಯಕ್ತಿಕ ನೆಲೆಯಲ್ಲಿ ಸ್ಥಳವನ್ನು ಸೂಚಿಸಬೇಕು ಎಂದಿದ್ದರೆ, ದಯವಿಟ್ಟು ನೀವು ಈ ಕಾರ್ಯದಲ್ಲಿ ಸಹಯೋಗ ನೀಡಬಹುದಾದ ಯಾವುದಾದರೂ ಒಂದು ಸ್ಥಳೀಯ ಸಮುದಾಯ ಗುಂಪನ್ನು ಹುಡುಕಿಕೊಳ್ಳಿ.
ಅವರು, ಇವರಲ್ಲಿ ಯಾರಾದರೂ ಆಗಿರಬಹುದು: ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್(ಆರ್ ಡಬ್ಲ್ಯುಎ), ಅಪಾರ್ಟ್ಮೆಂಟ್ ಅಸೋಸಿಯೇಷನ್ (ಎಎ), ಸರಕಾರೇತರ ಸಂಸ್ಥೆ (ಎನ್ ಜಿ ಒ), ಸಮುದಾಯ ಆಧಾರಿತ ಸಂಸ್ಥೆ (ಸಿಬಿಒ), ವಾಣಿಜ್ಯ ಸಂಘ ಅಥವಾ ಟ್ರಸ್ಟ್.
ಇಂಥ ಒಂದು ಸಂಸ್ಥೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದಲ್ಲಿ, ದಯವಿಟ್ಟು info@sensinglocal.in ರಲ್ಲಿ ನಮ್ಮನ್ನು ಸಂಪರ್ಕಿಸಿ. ಅಂಥ ಒಂದು ಸಂಸ್ಥೆಯನ್ನು ಕಂಡುಕೊಳುವಲ್ಲಿ ನಾವು ನಿಮಗೆ ನೆರವಾಗುತ್ತೇವೆ.
2. ಹಯೋಗಕ್ಕಾಗಿ ಇಂಥ ಒಂದು ಸಮುದಾಯ ಆಧಾರಿತ ಸಂಸ್ಥೆ ಏಕೆ ಬೇಕು?
ನೀವು ಒಬ್ಬ ವ್ಯಕ್ತಿಯಾಗಿದ್ದರೆ ಅಥವಾ ಒಬ್ಬ ಆರ್ಕಿಟೆಕ್ಟ್ / ಅರ್ಬನ್ ಡಿಸೈನರ್ / ಡಿಸೈನರ್ ನಿಮ್ಮ ಸಮೀಪದಲ್ಲಿರುವ ಒಂದು ಸಾರ್ವಜನಿಕ ಸ್ಥಳವನ್ನು ಸೂಚಿಸುತ್ತಿರುವುದಾದರೆ, ನಿಮ್ಮ ಜೊತೆ ಸಹಯೋಗಕ್ಕಾಗಿ ಒಂದು ಸಮುದಾಯ ಆಧಾರಿತ ಗುಂಪನ್ನು ಗುರುತಿಸಬೇಕಾಗುತ್ತದೆ.
ಇದಕ್ಕೆ ಕಾರಣವೇನೆಂದರೆ, ನಾವು ಸಮುದಾಯ ಆಧಾರಿತ ಗುಂಪಿನ ಪಾತ್ರವನ್ನು ಈ ಕೆಳಗಿನಂತೆ ಕಾಣುತ್ತೇವೆ:
-
ಕಾರ್ಯಯೋಜನೆಯ ಇಡೀ ಅವಧಿಯಲ್ಲಿ ಬಿಬಿಎಂಪಿಯೊಂದಿಗೆ ಸ್ಥಿರವಾದ ಸಂಬಂಧವನ್ನು ಹೊಂದಿರುತ್ತದೆ.
-
ಯೋಜನೆಯ ಅನುಷ್ಠಾನದ ನಂತರವೂ ಸುಧಾರಣೆ ಹೊಂದಿದ ಸ್ಥಳದ ನಿಗಾವಣೆಯನ್ನು ವಹಿಸಿ ಅದು ಸುಸ್ಥಿತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುತ್ತದೆ.
-
ಸುಧಾರಿತ ಸ್ಥಳವನ್ನು ಬಳಸುವ ಅಥವಾ ಇದರಿಂದ ಪ್ರಭಾವಿತರಾಗಿರುವವರು ಮತ್ತು ಅವರ ಅಗತ್ಯಗಳ ಮಟ್ಟಿಗೆ ಹೆಚ್ಚಿನವರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ,
-
ಸಾರ್ವಜನಿಕ ಸ್ಥಳದ ವಿನ್ಯಾಸವನ್ನು ತಿಳಿಸಲು ಸಹಭಾಗೀ ವಿಚಾರ ವಿನಿಮಯ ಗೋಷ್ಟಿಗಳನ್ನು ನಡೆಸುವರು ಮತ್ತು ಅವುಗಳನ್ನು ಬೆಂಬಲಿಸುವರು.
3. ಸೂಚಿತ ಸ್ಥಳಗಳ ಸಂಗ್ರಹವನ್ನು ಸೃಷ್ಟಿ ಮಾಡುವುದರ ಉದ್ದೇಶವೇನು?
ಇಡೀ ಬೆಂಗಳೂರು ನಗರದ ವಿವಿಧ ನೆರೆಹೊರೆಗಳಲ್ಲಿ, ಕಡಿಮೆ ಬಳಕೆಯಾಗಿರುವ ಹಲವಾರು ಸ್ಥಳಗಳು ಇವೆ, ಅವುಗಳನ್ನು ಅಭಿವೃದ್ಧಿಪಡಿಸಿದಾಗ ಅವುಗಳೊಂದಿಗೆ ದೈನಂದಿನವಾಗಿ ಬೇರೆ ಬೇರೆ ರೀತಿಯಲ್ಲಿ ಸಂಬಂಧವನ್ನು ಹೊಂದಿರುವ ಜನರ ಬದುಕುಗಳ ಗುಣಮ ಟ್ಟದ ಮೇಲೆ ಗಹನವಾದ ಪ್ರಭಾವವನ್ನು ಬೀರಬಲ್ಲವು. ಇಂಥ ಸ್ಥಳಗಳನ್ನು ಗುರುತಿಸಿ, ಬಿಬಿಎಂಪಿಗೆ ತಿಳಿಸಲು ಸಾರ್ವಜನಿಕರನ್ನೇ ಆಹ್ವಾನಿಸುವುದು ಹೆಚ್ಚು ಸಹಭಾಗೀ ವಿಧಾನವಾಗಿದೆ.
ಸಾರ್ವಜನಿಕ ಸಹಭಾಗಿತ್ವದೊಂದಿಗೆ ಇಂಥ ಸ್ಥಳಗಳ ಒಂದು ಸಂಗ್ರಹವನ್ನು ಸೃಷ್ಟಿಸುವುದು ಮುಂದಿನ ಐದು ವರ್ಷಗಳಿಗಾಗಿ ಒಮ್ಮೆ ಮಾಡಿಮುಗಿಸುವ ಕಾರ್ಯವಾಗಿದೆ. ಬಿಬಿಎಂಪಿಯು ವಾರ್ಷಿಕ ಯೋಜನೆಯಡಿಯಲ್ಲಿ ಪುನರಭಿವೃದ್ಧಿಗಾಗಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಸಂಗ್ರಹವು ಸಹಾಯಕವಾಗುತ್ತದೆ.
4. ಸಾರ್ವಜನಿಕ ಸ್ಥಳವು ಒಮ್ಮೆ ಈ ಸಂಗ್ರಹಕ್ಕಾಗಿ ಸೂಚಿತವಾದ ನಂತರ ಮುಂದೆ ಏನಾಗುತ್ತದೆ?
ಅವುಗಳ ಪರಿವರ್ತನೆ ಮತ್ತು ಅದರಿಂದಾಗುವ ಸಂಭವನೀಯ ಪ್ರಯೋಜನಕ್ಕಾಗಿ ಸ್ಥಳಗಳನ್ನು ಮೌಲ್ಯಮಾಪನ ಮಾಡಲಾಗುವುದು. ನಂತರ ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕ ಕಾರ್ಯಾಚರಣೆಗಳ ಆಧಾರದ ಮೇಲೆ ಗುರುತಿಸಲಾದ ಸ್ಥಳಗಳನ್ನು ಅಭಿವೃದ್ಧಿಗಾಗಿ ಹಣಕಾಸು ಅಂದಾಜು ಮತ್ತು ಅನುಷ್ಠಾನವನ್ನು ಕೈಗೊಳ್ಳಲಾಗುವುದು.
5. ಈ ಯೋಜನೆಯಲ್ಲಿ ಭಾಗವಹಿಸಲು ಯಾವ ಬಗೆಯ ಸಂಸ್ಥೆಗಳು ಅರ್ಹವಾಗಿವೆ?
ವಾಸ್ತುಶಿಲ್ಪಿಗಳು, ನಗರ ವಿನ್ಯಾಸಕರು ಮತ್ತು ವಿನ್ಯಾಸ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ವೃತ್ತಿಪರ ಸಂಸ್ಥೆಗಳು ಇದರಲ್ಲಿ ಭಾಗವಹಿಸಲು ಅರ್ಹವಾಗಿವೆ. ಈ ವಲಯದ ವಿದ್ಯಾರ್ಥಿಗಳೂ ಅವರ ಸಂಸ್ಥೆಗಳ ಮೂಲಕ ಭಾಗವಹಿಸಬಹುದು.
6. ಸಮುದಾಯ/ಆರ್ಕಿಟೆಕ್ಟ್ / ಅರ್ಬನ್ ಡಿಸೈನರ್ / ಡಿಸೈನರ್ ಒಂದಕ್ಕಿಂತ ಹೆಚ್ಚು ಸ್ಥಳಗಳನ್ನು ಸೂಚಿಸಬಹುದೇ?
ಸೂಚಿಸಬಹುದು. ಆಗ ಅವರು ಒಂದೊಂದು ಸ್ಥಳದ ಕುರಿತೂ ಒಂದೊಂದು ನಮೂನೆಯನ್ನು ತುಂಬಬೇಕು.
ಈ ಕಾರ್ಯಕ್ರಮವನ್ನು ಬಿಬಿಎಂಪಿ, ಸೆನ್ಸಿಂಗ್ ಲೋಕಲ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ (ಕರ್ನಾಟಕ), ಇವರು ಸಂಯುಕ್ತವಾಗಿ ರೂಪಿಸಿದ್ದಾರೆ, ಸಸ್ಟೇನಬಲ್ ಮೊಬಿಲಿಟಿ ನೆಟ್ವರ್ಕ್ ಇದನ್ನು ಬೆಂಬಲಿಸುತ್ತದೆ. ಬೆಂಗಳೂರು ವಾರ್ಡ್ ಸಮಿತಿ ಬಳಗವು ನಮ್ಮ ಸಾರ್ವಜನಿಕ ಸಂಪರ್ಕ ಪಾಲುದಾರರಾಗಿದ್ದಾರೆ.



