top of page
ಬಿಬಿಎಂಪಿ_ಲೋಗೋ (2).png

ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವಿತಗೊಳಿಸುವುದು

ಕಾರ್ಯಕ್ರಮದ ಕುರಿತು

ಹಿನ್ನೆಲೆ

ಕಳೆದ ಮೂರು ವರ್ಷಗಳಲ್ಲಿ, ಸುಸ್ಥಿರ ಮೊಬಿಲಿಟಿ ನೆಟ್‌ವರ್ಕ್‌ನ ಭಾಗವಾಗಿ, ಸೆನ್ಸಿಂಗ್ ಲೋಕಲ್ ಮತ್ತು ಇತರ ಪಾಲುದಾರರು, ಅರ್ಬನ್ ರಿವ್ಯಾಂಪ್ ಡಿಸೈನ್ ಚಾಲೆಂಜ್ (www.urbanrevamp.in) ಕಾರ್ಯಕ್ರಮ ಅನ್ನು ಚಾಲನೆಗೆ ತಂದರು. ಸದರಿ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿಗಳಿಂದ ವಿನ್ಯಾಸ ಪ್ರಸ್ತಾವನೆಗಳನ್ನು ಆಹ್ವಾನಿಸಲಾಯಿತು. ಇದನ್ನು ನೆರೆಹೊರೆಯ ಸಕ್ರಿಯ ನಾಗರಿಕ ಗುಂಪುಗಳು ಬೆಂಬಲಿಸಿದ್ದು, ಎರಡು ಸತತ ಸ್ಪರ್ಧೆಗಳಲ್ಲಿ ನಾಲ್ಕು ಸ್ಥಳಗಳಿಗೆ 60+ ವಿನ್ಯಾಸ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು.

 

 ಈ ಸ್ಪರ್ಧೆಯು ನಗರದಾದ್ಯಂತ ನೆರೆಹೊರೆಯ-ಪ್ರಮಾಣದ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸುವ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇದರ ಆಧಾರದ ಮೇಲೆ, 'ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸುವುದು' ಕಾರ್ಯಕ್ರಮವನ್ನು ಸರ್ಕಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ನಾಗರಿಕರು ಮತ್ತು ವಾಸ್ತುಶಿಲ್ಪಿಗಳು, ನಗರ ವಿನ್ಯಾಸಕರು ಮತ್ತು ಇತರ ತಾಂತ್ರಿಕ ತಜ್ಞರ ನಡುವಿನ ಪಾಲುದಾರಿಕೆಯನ್ನು ಬಳಸಿಕೊಳ್ಳುವ ಮೂಲಕ ಬಳಕೆಯಾಗದ ನೆರೆಹೊರೆಯ-ಮಟ್ಟದ ಸಾರ್ವಜನಿಕ ಸ್ಥಳಗಳನ್ನು ವಿನೂತನ ಪರಿಕಲ್ಪನೆಯೊಂದಿಗೆ ಸಮಗ್ರ,ವಾದ ರೀತಿಯಲ್ಲಿ ಸಾವಜನಿಕರಿಗೆ ಸದ್ಬಳಕೆಯಾಗುವಂತೆ ಮರು-ಕಲ್ಪಿಸಲು ನಗರಾದ್ಯಂತದ ಉಪಕ್ರಮವಾಗಿ ಕಲ್ಪಿಸಲಾಗಿದೆ.

5 ಮುಖ್ಯ ಗುರಿಗಳು

  • ಕಡಿಮೆ ಬಳಕೆಯಾಗುತ್ತಿರುವ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಪಟ್ಟಿ ಮಾಡುವುದು; ಅವುಗಳ ಪುನರಾಭಿವೃದ್ಧಿಗಾಗಿ ನಾಗರಿಕರು/ಸಮುದಾಯ ಗುಂಪುಗಳಿಂದ ಬಂದಿರುವ ಬೇಡಿಕೆ ಮತ್ತು ಅವರ ಆಕಾಂಕ್ಷೆಯನ್ನು ಒಟ್ಟುಗೂಡಿಸುವುದು ಮತ್ತು ಬಿಬಿಎಂಪಿ 5 ವರ್ಷಗಳ ಅವಧಿಯಲ್ಲಿ ಇಂಥ ಸ್ಥಳಗಳನ್ನು ವ್ಯವಸ್ಥಿತವಾಗಿ ಮರು-ಅಭಿವೃದ್ಧಿಪಡಿಸಲು ವಹಿಸಿಕೊಳ್ಳುವುದು.

  • ಸಮಗ್ರ, ಜನಾನುಕೂಲಿ ಮತ್ತು ವಾಸಯೋಗ್ಯ ನಗರಗಳನ್ನು ಖಚಿತಪಡಿಸಿಕೊಳ್ಳಲು, ಸಂಭಾವ್ಯ ತಾಣಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಮೌಲ್ಯಮಾಪನ ಮಾಡಿ, ಅವುಗಳನ್ನು ರಾಷ್ಟ್ರೀಯ, ರಾಜ್ಯ ಮತ್ತು ನಗರ ಮಟ್ಟದ ನೀತಿಗಳೊಂದಿಗೆ ಕಾರ್ಯಸಾಧ್ಯತೆ ಮತ್ತು ಪ್ರಭಾವದ ಮೌಲ್ಯಮಾಪನಕ್ಕಾಗಿ ಚೌಕಟ್ಟನ್ನು ರಚಿಸುವುದು.

  • ಯೋಜನೆಗಳ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ವಾಸ್ತುಶಿಲ್ಪಿಗಳು ಮತ್ತು ನಗರ ವಿನ್ಯಾಸಕರನ್ನು ತೊಡಗಿಸಿಕೊಳ್ಳಲು ಬಿಬಿಎಂಪಿಯೊಂದಿಗೆ ಕೈಝೋಡಿಸಿ ಪ್ರಕ್ರಿಯೆಯನ್ನು ಸರಳೀಕರಿಸುವುದು ಮತ್ತು ಸುವ್ಯವಸ್ಥಿತಗೊಳಿಸುವುದು.

  • . ಸ್ಥಳವನ್ನು ಸೂಚಿಸಿವುದು, ಸಂಕ್ಷಿಪ್ತ ಅಭಿವೃದ್ಧಿ, ವಿನ್ಯಾಸ ಮತ್ತು ಅನುಷ್ಠಾನದ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗಾಗಿ ಕಾರ್ಯವಿಧಾನಗಳನ್ನು ರೂಪಿಸುವುದು.

  •  ವಿನ್ಯಾಸ ಅಭಿವೃದ್ಧಿ ಮತ್ತು ನಿರ್ವಹಣೆಯಂತಹ ಅಂಶಗಳಿಗೆ ಬೆಂಬಲ ನಿಧಿಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಅನ್ವೇಷಿಸುವುದು.

ಪಾಲುದಾರರು

ಬಿಬಿಎಂಪಿ

The BBMP (Bruhat Bengaluru Mahanagara Palike) is the municipal corporation in charge of governing the city of Bengaluru. BBMP Central Projects Department, anchoring this program is responsible for planning and executing projects related to infrastructure development and road construction. The department has been instrumental in supporting several innovative public space improvement projects in Bengaluru such as - Racecourse road junction, Anand Rao circle, Under shivananda flyover, BHEL junction, Maurya junction, Gandhi Bazaar street, 200 School access zones along 64km white topping roads and the Urban revamp programme supporting 4 public spaces in the neighbourhood of Banaswadi, Doddanakundi, Padyaranaya and Kasturi Nagar.

ಸೆನ್ಸಿಂಗ್ ಲೋಕಲ್

2016 ರಲ್ಲಿ ಸ್ಥಾಪನೆಯಾದ ಸೆನ್ಸಿಂಗ್ ಲೋಕಲ್, ಭಾರತೀಯ ನಗರಗಳಲ್ಲಿ ಪರಿಸರ ಮತ್ತು ಸರ‍್ವಜನಿಕ ಆರೋಗ್ಯದ ಸವಾಲುಗಳನ್ನು, ಸಹಭಾಗಿತ್ವ ಮತ್ತು ದತ್ತಾಂಶ ಆಧಾರಿತ ನರ‍್ಧಾರದ ಮೂಲಕ ನಿಭಾಯಿಸುವತ್ತ ಗಮನ ಹರಿಸುವ ರ‍್ಬನ್ ಲಿವಿಂಗ್ ಲ್ಯಾಬ್ ಆಗಿದೆ. ಬಹು-ಶಿಸ್ತಿನ ವಿಧಾನವು ನಗರ ಯೋಜನೆ, ವಿನ್ಯಾಸ ಮತ್ತು ಆಡಳಿತದಲ್ಲಿ ಪ್ರಮುಖ ಪರಿಣತಿಯನ್ನು ಹೊಂದಿದೆ. ಹೆಚ್ಚು ಸುಸ್ಥಿರ ಮತ್ತು ಸಮಗ್ರ ಭವಿಷ್ಯದತ್ತ ನರ‍್ಧಾರತೆಗೆದುಕೊಳ್ಳುವಿಕೆಯನ್ನು ಮುನ್ನಡೆಸಲು ಕರ‍್ಯತಂತ್ರ ಅಭಿವೃದ್ಧಿ, ಪುರಾವೆಗಳ ಸಂಗ್ರಹಣೆ, ಒಮ್ಮತ ನರ‍್ಮಾಣ ಮತ್ತು ದೂರದೃಷ್ಟಿಯಲ್ಲಿ ಬೆಂಬಲವನ್ನು ನೀಡುವ ರ‍್ಕಾರಿ ಸಂಸ್ಥೆಗಳು, ಎನ್‌ಜಿಒ ಗಳು, ಸಮುದಾಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ನಾವು ಕೆಲಸ ಮಾಡುತ್ತೇವೆ. ನಮ್ಮ ಪ್ರಮುಖ ವಲಯಗಳಲ್ಲಿ ತ್ಯಾಜ್ಯ ನರ‍್ವಹಣೆ, ವಾಯು ಮಾಲಿನ್ಯ, ಸುಸ್ಥಿರ ಚಲನಶೀಲತೆ, ಜಲ ಮಾಲಿನ್ಯ ಮತ್ತು ಸರ‍್ವಜನಿಕ ಸ್ಥಳ ವಿನ್ಯಾಸ ಒಳಗೊಂಡಿವೆ. 

ಇನ್ಸ್ಟಿಟ್ಯೂಟ್ಆಫ್ಅರ್ಬನ್ಡಿಸೈನರ್ಸ್ಇಂಡಿಯ (ಐಯುಡಿಐ) ಕರ್ನಾಟಕ

2006 ರಲ್ಲಿ ಸ್ಥಾಪನೆಯಾದ ಇನ್ಸ್ಟಿಟ್ಯೂಟ್ ಆಫ್ ರ‍್ಬನ್ ಡಿಸೈರ‍್ಸ್ ಇಂಡಿಯ (ಐಯುಡಿಐ) ರ‍್ನಾಟಕ ದೇಶಾದ್ಯಂತ ೪೦೦ ಕ್ಕೂ ಹೆಚ್ಚು ನಗರ ವಿನ್ಯಾಸಕರ ಸದಸ್ಯತ್ವವನ್ನುಹೊಂದಿದೆ. ಇದರ ರ‍್ನಾಟಕ ಚಾಪ್ಟರ್ ರಾಜ್ಯಾದ್ಯಂತ ೩೦ ಕ್ಕೂ ಹೆಚ್ಚು ನಗರ ವಿನ್ಯಾಸಕರನ್ನು ಒಳಗೊಂಡಿದೆ,     ಅವರು ನಗರ ಅಭಿವೃದ್ಧಿ ಮತ್ತು ಪ್ರದೇಶ ಆಧಾರಿತ ಯೋಜನೆಗಳು ಸೇರಿದಂತೆ ವಿವಿಧ ಅಳತೆಯ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಐಯುಡಿಐ-ರ‍್ನಾಟಕದ ಸದಸ್ಯರು ನಗರ ವಿನ್ಯಾಸ, ಸ್ಥಳೀಕರಣ, ಯೋಜನೆ, ಪರಂಪರೆ ಸಂರಕ್ಷಣೆ, ಸರ‍್ವಜನಿಕ ಭಾಗವಹಿಸುವಿಕೆ, ಸಾರಿಗೆ, ವಾಸ್ತುಶಿಲ್ಪ, ಪರಿಸರವಿಜ್ಞಾನ, ಸುಸ್ಥಿರತೆ, ಹಣಕಾಸು ಮತ್ತು ರಿಯಲ್ಎಸ್ಟೇಟ್‌ನಲ್ಲಿ ಪರಿಣತಿಯನ್ನು ಹೊಂದಿದ್ದಾರೆ, ಮತ್ತು ಜನಾನುಕೂಲಿ, ಎಲ್ಲರನ್ನೊಳಗೊಳ್ಳುವ ಮತ್ತು ಸ್ಥಳ-ನರ‍್ದಿಷ್ಟ ನಗರ ಪರಿಸರಗಳನ್ನು ರಚಿಸಲು ವೈವಿಧ್ಯಮಯ ಪಾಲುದಾರರೊಂದಿಗೆ ಬಹು-ಶಿಸ್ತಿನ ವಿಧಾನವನ್ನು ಸುಗಮಗೊಳಿಸುತ್ತಾರೆ. ಅವರ ವಿನ್ಯಾಸ ವಿಧಾನವು ಪರಿಸರ ಉಸ್ತುವಾರಿ, ಸಾಮಾಜಿಕ ಸಮಾನತೆ ಮತ್ತು ರ‍್ಥಿಕ ಕರ‍್ಯಸಾಧ್ಯತೆಯನ್ನು ಸಂಯೋಜಿಸುತ್ತದೆ. ನುರಿತ ನಗರ ವಿನ್ಯಾಸಕರಾಗಿ, ಅವರು ಯೋಜನೆ ಮತ್ತು ವಾಸ್ತುಶಿಲ್ಪವನ್ನು ಒಟ್ಟಿಗೆ ತರುತ್ತಾರೆ, ನರ‍್ಮಿತ ಪರಿಸರ ಮತ್ತು ಅದು ಸೇವೆ ಸಲ್ಲಿಸುವ ಸಮುದಾಯಗಳ ಗುಣರ‍್ಧನೆಯನ್ನು ಮಾಡುವ ನೀತಿಗಳು ಮತ್ತು ಮಧ್ಯಸ್ಥಿಕೆಗಳನ್ನುರೂಪಿಸುತ್ತಾರೆ.

Bengaluru Ward Samiti Balaga

Ward Samiti Balaga is a coalition of Active Citizens and Citizens Groups in Bengaluru, established in 2022, to work in convergence with city governments, predominantly towards strengthening Ward Committees and Area Sabhas. This coalition was initiated by Janagraha and is supported by other organisations such as Sensing Local, Apsa, SWMRT, etc.

ಈ ಕಾರ್ಯಕ್ರಮವನ್ನು ಬಿಬಿಎಂಪಿ, ಸೆನ್ಸಿಂಗ್ ಲೋಕಲ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ (ಕರ್ನಾಟಕ), ಇವರು ಸಂಯುಕ್ತವಾಗಿ ರೂಪಿಸಿದ್ದಾರೆ, ಸಸ್ಟೇನಬಲ್ ಮೊಬಿಲಿಟಿ ನೆಟ್ವರ್ಕ್ ಇದನ್ನು ಬೆಂಬಲಿಸುತ್ತದೆ. ಬೆಂಗಳೂರು ವಾರ್ಡ್ ಸಮಿತಿ ಬಳಗವು ನಮ್ಮ ಸಾರ್ವಜನಿಕ ಸಂಪರ್ಕ ಪಾಲುದಾರರಾಗಿದ್ದಾರೆ. 

Sensing Local PNG logo-01 (1) (1).png
IUDI Karnataka logo (1)_edited.png
SMN_logo-final-black (4)_edited (1).png
images (1).png
bottom of page